Thursday, 17 October 2013

Hucchukodi Manassu...


 ಹುಚ್ಚು ಕೊಡಿ ಮನಸ್ಸು

ಎಲ್ಲೋ ಕಳೆದು ಹೋಯಿತು ಮನವು, ಎಲ್ಲೊ ಮೂಡಿತು ಪ್ರೀತಿಯ ಅಲೆಯು.
ನನ್ನ ನಾ ಪಡೆದು ಕೊಂಡೆನು ಕಳೆದು ಕೊಳ್ಳುತ ನನ್ನನು.
 ಓ ಜೀವವೇ ನೀ ಮತ್ತೆ ಮೂಡಿಬಾ  ನೀ ಮತ್ತೆ' ನಲಿದಾಡುತ' ನಡೆದಾಡುತ ಬಾ ನನ್ನ ಬಳಿಗೆ ಕಾದಿದೆ ಮನವು ಹಂಬಲಿಸುತ, ಹಸಿದಾದ ಕನಸೊಂದು ಮೂಡಿದೆ ಹೊಸದಾದ ಬಯಕೆಒಂದು ಕಾಡಿದೆ. ಆತ್ಮವೇ ಸತ್ಯ ದೇಹವೇ ಮಿಥ್ಯ, ನಾನು ನಾನೆಂಬ ಅರಿವಾಗಿದೆ ನನ್ನ ಅಸ್ತಿತ್ವವೇ ಮಿಥ್ಯಯೇನ್ದೆನ್ಸಿದೆ.
ಸತ್ಯ ಅಸತ್ಯದ ನಡುವಿನ ಬಾಳೆ ಜೀವನ, ನಾನು ನನ್ನದೆಮ್ಬುದರ ಹಂಬಲವೇ ಬದುಕು.
ಬಚ್ಚಿ ಕೊಳ್ಳಲಾಗದು' ಮನದ ಆಸೆಯು, ಹಿಡಿದು ಕೊಳ್ಳಲಾರೆ ಹೃದಯದ ತವಕವ.
ಹುಟ್ಟಿದೆ ಇಂದು ಒಂದು ಕನಸು, ಸಾಕಿಂದು ಆದರೆ ಅದೇ ನನಸು.
ಸ್ವಾರ್ತಿನಾನೆಂದು ಅರಿಯುವ ಮುನ್ನವೇ ಮನದಾಸೆಯು ಮನದಂಗಳದಿ ಮನೆಮಾಡಿದೆ, ಹೃದಯಕೆ ಮುದ ನೀಡುವ ಪ್ರೀತಿಯ ತೋರಿದೆ.
ಕಳೆದು ಹೋದ ಹಳೆಯ ಹಾಡಿನ ಸಾಲಿನಂತಾಗಿದೆ ಮನಸ್ಸಿನ ಪರಿಮಿತಿಯು, ತಿಳಿಯದೆ ಮೂಡಿದೆ ಹೊಸತೊಂದು ಕಾವ್ಯವು
ಅರಿಯೆ ನಾ ನಾನೆಂಬುದು ಸತ್ಯವೋ ಅಥವಾ ನಾನೇ ಮಿಥ್ಯಯೆಯೋ, ಮೌನಿಯಾಗಿದೆ ಕಾಣದ ಕೂಗಿನ ಹಕ್ಕಿಯು ಬರಿದಾಗಗಿದೆ ನಲಿಯುತ ನಲಿದಾಡಿದೆ ಹಾಡಿದ್ಯು. ಕಾದಿರುವೆ ನಾ ನಿನ್ನ ನೆನಪಿಗೆ ಕಾಯುವಂತೆ ಈ ಧರೆಯು ಮಳೆಯ ಹನಿಗಳಿಗೆ. ತಿಳಿಸಿ ತಿಳಿಯೇನಾ ಒಳರ್ಥವ;ತಿಳಿದು ಮರೆತೆನ ಮಣ್ಣಿನ ಋಣವ ಬಂದು ಹೋಗಬೇಕೆಂದು ಬೇಡಿಕೊಂಡಿದೆ ನನ್ನ ಊರು, ನೆನಪಿನ ಅಂಗಳದಿ ಇನ್ನೆಂದು ಸಿಗದ ಆ ಸಂತೋಷವು ನನ್ನ ನೋಡಿ ನಗುತಿದೆ, ನಕ್ಕಿ ಹೇಳುತಿದೆ ಓ ಮಂಕೆ ನಿನ್ನೆ ಮೇಲೆಯೇ ನಿನಗೇಕೆ ಶಂಕೆ. ತಿಳಿಯೇನಾ ಪದಗಳ ಅರ್ಥ ಮನ ಹೇಳಿದ ಮಾತುಗಳ ನಾನಿಂದು ಗೀಚಿರುವೆ, ತಿಳಿದರೆ ತಿಳಿಸಿ ಎಂದು ವಿನಮ್ರಥೆಇನ್ಧ ಕೇಳ ಬಯಸಿದೆ ನನ್ನ ಮನದಾಳದ ಹಕ್ಕಿಯು